ಗುರುವಾರ ವಿಷ್ಣುವಿಗೆ ಉಪವಾಸ ಮಾಡುವವರು ಈ ನಿಯಮಗಳನ್ನು ಅನುಸರಿಸಿದರೆ ಮಾತ್ರ ವಿಷ್ಣುವಿನ ಅನುಗ್ರಹ ಲಭಿಸುವುದು.

550

ನಮಸ್ಕಾರ ಸ್ನೇಹಿತರೆ ವಿಷ್ಣುವನ್ನು ಜಗತ್ತಿನ ಪಾಲಕ ಎಂದು ಕರೆಯಲಾಗುತ್ತದೆ, ಬ್ರಹ್ಮ ಜಗತ್ತಿನ್ನು ಸೃಷ್ಟಿಸಿದರೆ ಶಿವ ಜಗತ್ತನ್ನು ವಿನಾಶ ಮಾಡುತ್ತಾನೆ ಹಾಗೂ ವಿಷ್ಣು ಜಗತ್ತನ್ನು ಪೋಷಿಸುತ್ತಾನೆ ಎಂದು ಹೇಳಲಾಗುತ್ತದೆ. ಇನ್ನು ಜೀವನದಲ್ಲಿ ಸಮಸ್ಯೆಗಳು ನಿವಾರಣೆಯಾಗಬೇಕು ಅಂದುಕೊಂಡ ಕೆಲಸ ಕಾರ್ಯಗಳು ನೆರವೇರಬೇಕು ಎಲ್ಲಾ ರೀತಿಯಿಂದಲೂ ನಾವು ಸುರಕ್ಷಿತವಾಗಿ ಇರಬೇಕು ಎಂದರೆ ಮಹಾವಿಷ್ಣುವನ್ನು ವಿಶೇಷವಾಗಿ ಆರಾಧಿಸಬೇಕು ಎಂದು ಹೇಳಲಾಗುತ್ತದೆ. ಗುರುವಾರದ ದಿನದಂದು ಮಹಾವಿಷ್ಣುವನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ ಈದಿನ ವಿಷ್ಣುವಿಗೆ ಮೀಸಲಾಗಿದೆ, ಸಾಕಷ್ಟು ಜನರು ಈ ಒಂದು ಗುರುವಾರದ ದಿನ ಉಪವಾಸ ವ್ರತ ಗಳನ್ನು ಮಾಡಿ ವಿಷ್ಣುವಿನ ನಾಮಸ್ಮರಣೆ ಸಹಸ್ರನಾಮ ವಿಷ್ಣುವಿನ ಅನುಗ್ರಹಕ್ಕಾಗಿ ಅವನನ್ನು ಆರಾಧಿಸುತ್ತಾರೆ, ಈ ರೀತಿಯಾಗಿ ಗುರುವಾರ ಉಪವಾಸ ಮಾಡಿ ವಿಷ್ಣುವನ್ನು ಆರಾಧಿಸುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ನಾವು ಗೊತ್ತೋ ಗೊತ್ತಿಲ್ಲದೆಯೋ ಮಾಡುವಂತಹ ತಪ್ಪುಗಳಿಗೆ ಕ್ಷಮೆ ಲಭಿಸುತ್ತದೆ ಹಾಗೂ ವಿಷ್ಣುವಿನ ಸಂಪೂರ್ಣ ಅನುಗ್ರಹ ನಮಗೆ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಬಲವಾಗಿದೆ, ಇದೇ ಕಾರಣಕ್ಕಾಗಿ ಸನಾತನ ಕಾಲದಿಂದಲೂ ಕೂಡ ಗುರುವಾರದಂದು ಮಹಾವಿಷ್ಣುವನ್ನು ಈ ರೀತಿಯಾಗಿ ಆರಾಧಿಸಲಾಗುತ್ತದೆ.

ಇನ್ನು ಗುರುವಾರದ ದಿನ ನಾವು ವಿಷ್ಣುವನ್ನು ಆರಾಧಿಸುವಾಗ ಕೆಲವು ತಪ್ಪುಗಳನ್ನು ಮಾಡಬಾರದು ನಿಯಮಬದ್ಧವಾಗಿ ಈ ಒಂದು ಗುರುವಾರದಲ್ಲಿ ವಿಷ್ಣುವಿಗೆ ಪೂಜೆಯನ್ನು ಸಲ್ಲಿಸುವುದರಿಂದ ವಿಷ್ಣುವಿನ ಸಂಪೂರ್ಣವಾದ ಅನುಗ್ರಹ ನಮಗೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಗುರುವಾರ ವಿಷ್ಣುವಿಗೆ ಯಾವ ರೀತಿಯಾಗಿ ಪೂಜೆಯನ್ನು ಸಲ್ಲಿಸಬೇಕು ಯಾವ ನಿಯಮಗಳನ್ನು ಅನುಸರಿಸಿ ಉಪವಾಸ ವ್ರತವನ್ನು ಮಾಡಬೇಕು ಎಂದು ನೋಡೋಣ. ಮೊದಲ ಬಾರಿ ಗುರುವಾರದ ದಿನ ಉಪವಾಸ ವ್ರತವನ್ನು ಮಾಡಲು ಆರಂಭಿಸಬೇಕು ಎಂದುಕೊಳ್ಳುವವರು ಯಾವ ತಿಂಗಳು ಪುಷ್ಯ ನಕ್ಷತ್ರ ಬಂದಿದೆಯೋ ಆ ತಿಂಗಳಿನಲ್ಲಿ ಆರಂಭಿಸಬೇಕು ಅಥವಾ ಗುರುವಾರದ ದಿನ ಏನಾದರೂ ಪುಷ್ಯ ನಕ್ಷತ್ರ ಬಂದಿದ್ದರೆ ನೀವು ಉಪವಾಸವನ್ನು ಮಾಡಲು ಆರಂಭಿಸಬಹುದು, ಅಥವಾ ಯಾವುದೇ ತಿಂಗಳ ಶುಕ್ಲ ಪಕ್ಷದ ಮೊದಲ ಗುರುವಾರದಿಂದ ಉಪವಾಸವನ್ನು ಮಾಡಬಹುದು, ಇದನ್ನು 16 ನೇ ಗುರುವಾರದವರೆಗೆ ಮಾಡಬೇಕು. ಇನ್ನು ಈ ಒಂದು ದಿನ ಬಾಳೆ ಹಣ್ಣನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ ಧಾರ್ಮಿಕ ನಂಬಿಕೆಗಳ ಪ್ರಕಾರ ಮಹಾವಿಷ್ಣು ಬಾಳೆ ಗಿಡದಲ್ಲಿ ನೆಲೆಸಿರುತ್ತಾರೆ ಎಂದು ಹೇಳುವ ಕಾರಣ ಬಾಳೆ ಹಣ್ಣನ್ನು ತಿನ್ನಬಾರದು ಈ ದಿನ ಬಾಳೆಹಣ್ಣಿನ ಗಿಡಕ್ಕೆ ನೀರು ಹಾಕಿ ಪೂಜಿಸಿ.

ಇನ್ನು ಮಹಾವಿಷ್ಣುವಿಗೆ ಹಳದಿಬಣ್ಣ ಪ್ರಿಯವಾಗಿ ಇರುವುದರಿಂದ ಗುರುವಾರದ ದಿನ ಹಳದಿ ಬಣ್ಣದ ಹಣ್ಣುಗಳು ಅಥವಾ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದು. ಇನ್ನು ಈ ಒಂದು ದಿನ ಅಪ್ಪಿತಪ್ಪಿಯೂ ಕೂಡ ಅನ್ನವನ್ನು ತಿನ್ನಬಾರದು ಇದರಿಂದ ಹಣಕಾಸಿನ ನಷ್ಟ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾಗಿ ಹಳದಿಬಣ್ಣದ ಆಹಾರಗಳನ್ನು ಸೇವಿಸಿ. ಈ ದಿನ ಹಸುಗಳಿಗೆ ಆಹಾರವನ್ನು ನೀಡಿ ಹಸುಗಳನ್ನು ಪೂಜಿಸಿ. ಗುರುವಾರದ ದಿನ ಸ್ನಾನ ಮಾಡುವಾಗ ಸ್ವಲ್ಪ ಅರಿಶಿಣವನ್ನು ನೀರಿಗೆ ಬೆರೆಸಿಕೊಂಡು ಸ್ನಾನಮಾಡಿ ಇದರಿಂದ ವಿಷ್ಣುವಿನ ಅನುಗ್ರಹದ ಜೊತೆಗೆ ಗುರುಬಲ ಕೂಡ ಹೆಚ್ಚಾಗುತ್ತದೆ. ನೀವು ಬಯಸಿದಂತ ಜೀವನ ನಿಮಗೆ ಸಿಗುತ್ತಾ ಇಲ್ಲವೇ ಹಾಗಾದ್ರೆ ಒಮ್ಮೆ ಫೋನ್ ಮಾಡಿ 96207 99909 ಎಂತಹ ಕಷ್ಟಗಳು ಇರಲಿ 48 ಗಂಟೆಯಲ್ಲಿ ವಿಶೇಷ ತಂತ್ರಗಳಿಂದ ನಿಮಗೆ ಆಗಿರುವ ಸಮಸ್ಯೆ ಕಂಡು ಹಿಡಿದು ಅದಕ್ಕೆ ಪರಿಹಾರ ಮಾಡುತ್ತೇವೆ, ನಮ್ಮನು ಫೋನ್ ಮೂಲಕ ಅಥವಾ ನೇರವಾಗಿ ನಮ್ಮ ಆಫೀಸ್ ಗೆ ಬಂದು ಕೂಡ ಭೇಟಿ ಆಗಬಹುದು, ಒಮ್ಮೆ ಫೋನ್ ಮಾಡಿ 96207 99909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here