ಇಂತಹ ಸಮಯದಲ್ಲಿ ಅರಳಿ ಮರ ನೋಡಬಾರದು ಮುಟ್ಟಬಾರದು ಹತ್ತಿರ ಹೋಗಬಾರದು ಹೋದ್ರೆ ಸರ್ವನಾಶ

542

ನಮಸ್ಕಾರ ಸ್ನೇಹಿತರೆ ಅರಳಿವೃಕ್ಷ ವನ್ನು ದೈವ ವೃಕ್ಷ ಎಂದು ಕರೆಯಲಾಗುತ್ತದೆ ಅರಳಿ ಮರವನ್ನು ಪೂಜಿಸುವುದರಿಂದ ಅರಳಿಮರದ ಪ್ರದಕ್ಷಿಣೆಯನ್ನು ಹಾಕುವುದರಿಂದ ನಿಮ್ಮ ಜಾತಕದಲ್ಲಿ ಇರುವ ಹಲವಾರು ದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತದೆ, ವಿಶೇಷವಾಗಿ ದೇವಾನು ದೇವತೆಗಳು ಅರಳಿವೃಕ್ಷ ದಲ್ಲಿ ವಾಸವಾಗಿರುತ್ತಾರೆ ಎಂದು ಕೂಡ ಹೇಳಲಾಗುತ್ತದೆ. ಅರಳಿ ಮರವನ್ನು ಕ್ರಮಬದ್ಧವಾಗಿ ಪೂಜಿಸುತ್ತಾ ಬರುವುದರಿಂದ ಮಹಾಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ ದೋಷಗಳು ನಿವಾರಣೆಯಾಗುತ್ತದೆ ಜೀವನದಲ್ಲಿ ಸುಖ ಸಂಪತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅರಳಿ ವೃಕ್ಷವನ್ನು ವಾರದಲ್ಲಿ ಒಂದು ದಿನ ಯಾವುದೇ ಕಾರಣಕ್ಕೂ ಅರಳಿ ಮರವನ್ನು ಮುಟ್ಟಬಾರದು ಮತ್ತು ಪೂಜಿಸಬಾರದು ಎಂಬ ನಿಷೇಧವಿದೆ ಈ ಒಂದು ವಿಷಯ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ, ಹಾಗಾದರೆ ಯಾವ ಒಂದು ದಿನ ಅರಳಿ ಮರವನ್ನು ಮುಟ್ಟಬಾರದು ಪೂಜಿಸಬಾರದು ಇದರಿಂದ ಎದುರಾಗುವ ಪರಿಣಾಮಗಳು ಏನು ಎಂದು ನೋಡೋಣ. ಪುರಾಣಗಳ ಪ್ರಕಾರ ಸಮುದ್ರಮಂತನದ ಸಂದರ್ಭದಲ್ಲಿ ಮಹಾಲಕ್ಷ್ಮಿದೇವಿಗೂ ಮುಂಚೆ ಅವಳ ಅಕ್ಕ ದರಿದ್ರಲಕ್ಷ್ಮಿ ಅಂದರೆ ಜೇಷ್ಠ ಲಕ್ಷ್ಮಿ ಉದ್ಭವಿಸುತ್ತಾಳೆ,

ಮಹಾಲಕ್ಷ್ಮಿದೇವಿ ನಂತರ ಉದ್ಭವವಾಗುತ್ತಾಳೆ, ಇಬ್ಬರ ಉದ್ಭವದ ನಂತರ ಇವರಿಬ್ಬರಿಗೂ ವಾಸಿಸಲು ಸ್ಥಳವಿಲ್ಲದೆ ಇದ್ದಾಗ ಮಹಾವಿಷ್ಣುವಿನ ಬಳಿ ಹೋಗಿ ನಮಗೆ ವಾಸಿಸಲು ಸ್ಥಳ ಬೇಕು ಎಂದು ಕೋರಿಕೆ ಸಲ್ಲಿಸುತ್ತಾರೆ ಆಗ ಮಹಾವಿಷ್ಣು ಅರಳಿಮರದ ವೃಕ್ಷದಲ್ಲಿ ವಾಸಿಸುವಂತೆ ಸ್ಥಳವನ್ನು ಕಲ್ಪಿಸುತ್ತಾರೆ, ನಂತರ ಮಹಾವಿಷ್ಣು ಮಹಾಲಕ್ಷ್ಮಿ ದೇವಿಯನ್ನು ಮದುವೆಯಾಗಲು ಬಯಸುತ್ತಾರೆ ಆದರೆ ಮಹಾಲಕ್ಷ್ಮಿದೇವಿ ಅಕ್ಕನ ಮದುವೆ ಆಗುವ ವರೆಗೂ ನಾನು ಮದುವೆ ಆಗುವುದಿಲ್ಲ ಮೊದಲು ಅಕ್ಕನಿಗೆ ಮದುವೆ ಮಾಡಿ ಎಂದು ಕೇಳುತ್ತಾಳೆ, ಆಗ ಮಹಾವಿಷ್ಣು ನಿನಗೆ ಯಾವ ರೀತಿಯಾದ ವರಬೇಕು ಎಂದು ಕೇಳಿದಾಗ ದರಿದ್ರಲಕ್ಷ್ಮಿ ನನಗೆ ಮನುಕುಲದಲ್ಲಾಗಲಿ ದೇವಕುಲದಲ್ಲಿ ಆಗಲಿ ಯಾರೂ ಪೂಜೆಯನ್ನು ಮಾಡದಂತಹ ವರಬೇಕು, ಪೂಜೆಯನ್ನು ಮಾಡದೇ ಇರುವಂತಹ ಸ್ಥಳ ಬೇಕು ಎಂದು ಕೇಳಿಕೊಳ್ಳುತ್ತಾಳೆ, ಇದು ಮಹಾವಿಷ್ಣುವಿಗೆ ಪೂರೈಸಲು ಆಗುವುದಿಲ್ಲ ಎನ್ನುವುದು ದರಿದ್ರಲಕ್ಷ್ಮಿ ಉದ್ದೇಶವಾಗಿರುತ್ತದೆ. ಆಗ ಮಹಾವಿಷ್ಣು ಎಲ್ಲಾ ಉಪಯೋಗಗಳನ್ನು ಮಾಡಿ ಋಷಿ ಎಂಬ ವರನನ್ನು ಹುಡುಕಿ ಮದುವೆ ಮಾಡುತ್ತಾರೆ,

ನಂತರ ಋಷಿಯು ತನ್ನ ಹೆಂಡತಿ ಕೇಳಿಕೊಂಡ ಹಾಗೆ ಪೂಜಾ ಕಾರ್ಯಗಳು ನಡೆಯದ ಅಂತಹ ಸ್ಥಳವನ್ನು ಹುಡುಕಿಕೊಂಡು ಹೋಗುತ್ತಾನೆ ಆದರೆ ಎಲ್ಲಿಯೂ ಕೂಡ ಅಂತಹ ಸ್ಥಳ ಸಿಗುವುದಿಲ್ಲ ಹಲವು ದಿನಗಳು ಕಳೆದರು ಕೂಡ ಅವನು ಬರುವುದಿಲ್ಲ ಇದರಿಂದ ಜೇಷ್ಠ ಲಕ್ಷ್ಮಿ ದುಃಖಕ್ಕೆ ಒಳಗಾಗುತ್ತಾರೆ, ಇದನ್ನು ನೋಡಿದ ಮಹಾಲಕ್ಷ್ಮಿದೇವಿ ಅಕ್ಕನ ವೇದನೆಯನ್ನು ತಾಳಲಾರದೆ ಮಹಾವಿಷ್ಣುವಿನ ಬಳಿ ಹೋಗಿ ಪರಿಹಾರ ಕೇಳುತ್ತಾಳೆ, ಆಗ ಮಹಾವಿಷ್ಣು ಭಾನುವಾರದ ದಿನ ಮಾತ್ರ ಅರಳಿವೃಕ್ಷ ದಲ್ಲಿ ದೇವಾನುದೇವತೆಗಳ ವಾಸ ಇರುವುದಿಲ್ಲ ಆದರೆ ಆ ಮರಕ್ಕೆ ಪೂಜೆಯು ಕೂಡ ಸಲ್ಲುವುದಿಲ್ಲ ಆ ದಿನ ಸಂಪೂರ್ಣವಾಗಿ ನೀನು ಮತ್ತು ನಿನ್ನ ಪತಿಯು ವೃಕ್ಷದಲ್ಲಿ ವಾಸಿಸಬಹುದು ಎಂದು ಹೇಳುತ್ತಾನೆ. ಅಲ್ಲಿಂದ ದರಿದ್ರಲಕ್ಷ್ಮಿ ಅರಳಿಮರದ ವೃಕ್ಷದಲ್ಲಿ ತನ್ನ ಪತಿಯ ಜೊತೆಗೆ ಭಾನುವಾರದ ಸಂಪೂರ್ಣ ದಿನ ಅಲ್ಲಿ ವಾಸಿಸುತ್ತಾರೆ, ಇದೇ ಕಾರಣಕ್ಕಾಗಿ ಭಾನುವಾರದ ದಿನ ಅರಳಿ ಮರವನ್ನು ಮುಟ್ಟಬಾರದು ಅರಳಿಮರದ ಪೂಜೆಯನ್ನು ಮಾಡಬಾರದು ಎಂದು ಹೇಳುತ್ತಾರೆ. ಒಂದು ವೇಳೆ ಅಪ್ಪಿತಪ್ಪಿ ಭಾನುವಾರದ ದಿನ ಅರಳಿಮರದ ಪೂಜೆಯನ್ನು ಮಾಡಿದರೆ ಮಹಾಲಕ್ಷ್ಮಿ ದೇವಿಯ ಬದಲು ದರಿದ್ರಲಕ್ಷ್ಮಿ ಮನೆಗೆ ಬರುತ್ತಾರೆ. ನಿಮ್ಮ ಯಾವುದೇ ಸಮಸ್ಯೆ ಇರಲಿ ನಂಬಿಕೆ ಇಟ್ಟು ಕರೆ ಮಾಡಿ 95388 66755 ನಮ್ಮಲ್ಲಿ ಮಾತ್ರವೇ ಪರಿಹಾರ ರಾಘವೇಂದ್ರ ಶಾಸ್ತ್ರಿಗಳು

LEAVE A REPLY

Please enter your comment!
Please enter your name here